ದ್ಯಾಟ್ ಸೆವೆಂಟೀಸ್ ಶೋ ಮೇ ೧೭, ೧೯೭೬ ರಿಂದ ಡಿಸೆಂಬರ್ ೩೧, ೧೯೭೯ವರೆಗೆ ಪಾಯಿಂಟ್ ಪ್ಲೇಸ್, ವಿಸ್ಕಾನ್ಸನ್ ಎಂಬ ಕಾಲ್ಪನಿಕ ಉಪನಗರ ಪಟ್ಟಣದಲ್ಲಿರುವ ಹದಿಹರೆಯದ ಸ್ನೇಹಿತರ ಒಂದು ಗುಂಪಿನ ಜೀವನಗಳ ಮೇಲೆ ಕೇಂದ್ರೀಕರಿಸುವ ಅಮೇರಿಕಾದ ಒಂದು ದೂರದರ್ಶನ ಕಾಲಮಾನ ಸಂದರ್ಭ ಹಾಸ್ಯ ಕಾರ್ಯಕ್ರಮ. ಅದರ ಪ್ರಥಮ ಪ್ರದರ್ಶನ ಫ಼ಾಕ್ಸ್ ದೂರದರ್ಶನ ಜಾಲದ ಮೇಲೆ ಆಗಸ್ಟ್ ೨೩, ೧೯೯೮ರಂದು ಆಯಿತು, ಎಂಟು ನಿರಂತರ ಸರಣಿಗಳಾಗಿ ಪ್ರದರ್ಶನ ಕಂಡಮೇಲೆ, ಮೇ ೧೮, ೨೦೦೬ರಂದು ೨೦೦ನೇ ಸಂಚಿಕೆಯೊಂದಿಗೆ ಕೊನೆಗೊಂಡಿತು. ಮುಖ್ಯ ಹದಿಹರೆಯದ ಪಾತ್ರವರ್ಗದಲ್ಲಿ ಟೋಫ಼ರ್ ಗ್ರೇಸ್, ಮಿಲಾ ಕುನಿಸ್, ಆಶ್ಟನ್ ಕುಚರ್, ಡ್ಯಾನಿ ಮಾಸ್ಟರ್‍ಸನ್, ಲಾವುರಾ ಪ್ರೀಪಾನ್, ಮತ್ತು ವಿಲ್ಮರ್ ವಾಲ್ಡರಾಮಾ ಇದ್ದರು.